Boycott INDvPAK : 'ನಾವು ನೋಡುವುದಿಲ್ಲ' ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್! ನೀವು ಏನು ಮಾಡುತ್ತೀರಾ?

Boycott INDvPAK : 'ನಾವು ನೋಡುವುದಿಲ್ಲ' ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್! ನೀವು ಏನು ಮಾಡುತ್ತೀರಾ?



India Pakistan cricket boycott

X ನಲ್ಲಿ [ಟ್ವಿಟ್ಟರ್] ನಲ್ಲಿ ಮತ್ತು ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಭಾರತ ಮತ್ತು ಪಾಕಿಸ್ತಾನ ಏಷ್ಯಾ ಕಪ್ ಪಂದ್ಯವನ್ನು ಬ್ಯಾನ್ ಮಾಡಿ ಮತ್ತು ಬೈಕಾಟ್ ಮಾಡಿ ಎಂದು ಕಳೆದ ಕೆಲವು ದಿನಗಳಿಂದ ಎಲ್ಲೆಡೆ ಟ್ರೆಂಡ್ ಆಗುತ್ತಿದೆ, ಇದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಹಂಚಿಕೊಂಡಿದ್ದೇವೆ, ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ.. 
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಇಂಡಿಯಾ vs ಪಾಕಿಸ್ತಾನ Asia Cup 2025 ಮ್ಯಾಚ್ ವಿರುದ್ಧದ ಬಾಯ್‌ಕಾಟ್ ಕರೆಗಳು ಭಾರೀ ಚರ್ಚೆಗೆ ಕಾರಣವಾಗಿವೆ. ಏಪ್ರಿಲ್ 22, 2025ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನಡೆದ ಈ ದಾಳಿಯಲ್ಲಿ 26 ಮಂದಿ ಪ್ರವಾಸಿಗರು (ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳು) ಜೀವವನ್ನು ಕಳೆದುಕೊಂಡರು. ಇದಕ್ಕೆ ಪ್ರತಿಕ್ರಿಯೆಯಾಗಿ ಭಾರತವು ಆಪರೇಷನ್ ಸಿಂಧೂರ್‌ನಲ್ಲಿ ವಾಯು ದಾಳಿ ನಡೆಸಿ, ಪಾಕ್‌ನ ಉಗ್ರ ಕ್ಯಾಂಪ್‌ಗಳನ್ನು ಗುರಿಯಾಗಿಸಿತು. ಇದು ನಾಲ್ಕು ದಿನಗಳ ಯುದ್ಧಕ್ಕೆ ಕಾರಣವಾಗಿ, ಮೇ 10ರಂದು ಸೀಜ್‌ಫೈರ್ ಘೋಷಿಸಲಾಯಿತು. ಇದು ಭಾರತದ ಇತಿಹಾಸದಲ್ಲಿ ಅತ್ಯಂತ ದುರಂತಗಳಲ್ಲಿ ಒಂದು.



Boycott INDvPAK

ಬಾಯ್‌ಕಾಟ್ ಟ್ರೆಂಡ್ ಹೇಗೆ ಉದ್ಭವಿಸಿತು?
ಸೆಪ್ಟೆಂಬರ್ 14, 2025ರಂದು ದುಬೈನಲ್ಲಿ ನಡೆಯುವ ಏಷ್ಯಾ ಕಪ್ 2025ರ ಗ್ರೂಪ್ ಸ್ಟೇಜ್ ಮ್ಯಾಚ್‌ಗೆ ಬಹಿಷ್ಕಾರ ಕರೆಗಳು ಬಲಗೊಂಡಿವೆ. "ಪಹಲ್ಗಾಮ್ ನಂತರ ಕ್ರಿಕೆಟ್ ಆಡುವುದು ನಾಚಿಕೆಗೆಡು" ಎಂದು ಜನರು ಹೇಳುತ್ತಿದ್ದಾರೆ. X (ಟ್ವಿಟರ್)ನಲ್ಲಿ #BoycottINDvPAK, #PahalgamTerrorAttack, #NoCricketWithTerror ಎಂಬ ಹ್ಯಾಶ್‌ಟ್ಯಾಗ್‌ಗಳು ಟ್ರೆಂಡ್ ಆಗಿವೆ. ಅನೇಕರು "ನಾವು ನೋಡುವುದಿಲ್ಲ" ಎಂದು ಪೋಸ್ಟ್ ಮಾಡುತ್ತಿದ್ದಾರೆ. ಇದು ಭಾರತೀಯರ ಕೋಪದ ಸಂಕೇತ – ಉಗ್ರರನ್ನು ಬೆಂಬಲಿಸುವ ದೇಶದೊಂದಿಗೆ ಸ್ಪೋರ್ಟ್ಸ್ ಮೂಲಕ ಸಹಭಾಗಿತ್ವ ಮಾಡುವುದು ತಪ್ಪು ಎಂದು. ಹೇಳುತ್ತಿದ್ದಾರೆ, ಇದರಿಂದಾಗಿ, ಭಾರತವು ಇಂಡಸ್ ವಾಟರ್ ಟ್ರೀಟಿ ಸಸ್ಪೆಂಡ್ ಮಾಡಿ, ವ್ಯಾಪಾರ ಮಾರ್ಗಗಳನ್ನು ಮುಚ್ಚಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಕ್ ವಿರುದ್ಧ ಕ್ರಮಗಳನ್ನು ತೆಗೆದುಕೊಂಡಿದೆ. ಆದರೂ, ಕ್ರಿಕೆಟ್ ಮ್ಯಾಚ್ ಮುಂದುವರೆಯುತ್ತಿದೆ ಎಂದು ಜನರಲ್ಲಿ ಕೋಪ.  #PahalgamAttack #BoycottINDvPAK #IndiaVsPakistanಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಿ. 




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು