Heart Attack Health Tips in Kannada - ಹೃದಯಾಘಾತದ ಮುನ್ನೆಚ್ಚರಿಕೆ ಲಕ್ಷಣಗಳು ಮತ್ತು ಆರೋಗ್ಯ ಸಲಹೆಗಳು
ಇಂದು ನಿಮಗೆ ಹೃದಯಾಘಾತದ ಬಗ್ಗೆ ವಿವರವಾಗಿ ತಿಳಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ, ಸಂಪೂರ್ಣ ವಾಗಿ ಓದಿ ಹೃದಯಾಘಾತದ ಮುನ್ನೆಚ್ಚರಿಕೆಗಳು, ಲಕ್ಷಣಗಳು ಮತ್ತು ಆರೋಗ್ಯದ ಬಗ್ಗೆ ಸಲಹೆಗಳನ್ನು ಈ ಕೆಳಗಿನ ವರದಿಯಲ್ಲಿ ತಿಳಿಸಲಾಗಿದೆ.
ಹೃದಯಾಘಾತ [Heart Attack] ಎಂದರೇನು?
ಹೃದಯಾಘಾತ (Heart Attack) ಅಂದರೆ, ಹೃದಯಕ್ಕೆ ರಕ್ತ ಸರಬರಾಜು ತಡೆಯಲ್ಪಟ್ಟಾಗ ಉಂಟಾಗುವ ಗಂಭೀರ ಆರೋಗ್ಯ ಸಮಸ್ಯೆ. ಇದಕ್ಕೆ ಮುಖ್ಯ ಕಾರಣ ರಕ್ತನಾಳಗಳಲ್ಲಿ ಕೊಬ್ಬಿನ ಅಡಚಣೆ (Blockage).ಆಗುವುದು.
ಹೃದಯಾಘಾತದ ಮುನ್ನೆಚ್ಚರಿಕೆ ಲಕ್ಷಣಗಳು :
- ಎದೆನೋವು ಅಥವಾ ಒತ್ತಡದ ಭಾವನೆ
- ಎಡ ಕೈ, ಬೆನ್ನು ಅಥವಾ ತೋಳುಗಳಲ್ಲಿ ನೋವು
- ಉಸಿರಾಟದ ತೊಂದರೆ
- ಅತಿಯಾದ ಬೆವರು (Cold Sweat)
- ತಲೆಸುತ್ತು ಅಥವಾ ವಾಂತಿ
ಈ ಮೇಲಿನ ಯಾವುದೇ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ಹೃದಯಾಘಾತಕ್ಕೆ ಕಾರಣವಾಗುವ ಸಾಮಾನ್ಯ ಅಂಶಗಳು ಇವು:
- ಹೆಚ್ಚಿನ ರಕ್ತದೊತ್ತಡ (BP)
- ಡಯಾಬಿಟಿಸ್
- ಅತಿಯಾದ ಧೂಮಪಾನ / ಮದ್ಯಪಾನ
- ಮೋಟಾಪು (Obesity)
- ಸ್ಟ್ರೆಸ್ ಮತ್ತು ವ್ಯಾಯಾಮದ ಕೊರತೆ
ಇಲ್ಲಿ ನೀಡಿರುವ ಮೇಲಿನ ಅಂಶಗಳು ಸಾಮನ್ಯವಾಗಿ ಹೃದಯಾಘಾತಕ್ಕೆ ಕಾರಣವಾಗುತ್ತವೆ ಆದ್ದರಿಂದ ಇದರ ಬಗ್ಗೆ ಎಚ್ಚರವಹಿಸಿ.
ಹೃದಯವನ್ನು ಆರೋಗ್ಯವಾಗಿರಿಸಿಕೊಳ್ಳುವ ಸಲಹೆಗಳು [Health Tips]: Heart Attack prevention Kannada
- ಸಮತೋಲನ ಆಹಾರ: ಹೆಚ್ಚು ಹಣ್ಣು, ತರಕಾರಿ, whole grains ತಿನ್ನಿ.
- ವ್ಯಾಯಾಮ: ಪ್ರತಿದಿನ 30 ನಿಮಿಷ ನಡೆದು, ಯೋಗಾ/ವ್ಯಾಯಾಮ ಮಾಡಿ.
- ಧೂಮಪಾನ ತಪ್ಪಿಸಿ: ಸಿಗರೇಟ್ ಮತ್ತು ಮದ್ಯ ಸೇವನೆ ನಿಲ್ಲಿಸಿ.
- ಸ್ಟ್ರೆಸ್ ನಿಯಂತ್ರಿಸಿ: ಧ್ಯಾನ, ಪ್ರಾಣಾಯಾಮ ಅಭ್ಯಾಸ ಮಾಡಿ.
- ನಿಯಮಿತ ತಪಾಸಣೆ: ವರ್ಷಕ್ಕೆ ಕನಿಷ್ಠ ಒಂದು ಬಾರಿ ಹೃದಯ ಪರೀಕ್ಷೆ ಮಾಡಿಸಿಕೊಳ್ಳಿ.
ನಮ್ಮೆಲ್ಲರ ಆರೋಗ್ಯ ನಮ್ಮ ಕೈನಲ್ಲೇ ಇರುತ್ತದೆ ಹೃದಯಾಘಾತವನ್ನು ಸಂಪೂರ್ಣವಾಗಿ ತಪ್ಪಿಸಲು ಸಾಧ್ಯವಿಲ್ಲದಿದ್ದರೂ, ಜೀವನ ಶೈಲಿಯಲ್ಲಿ ಬದಲಾವಣೆ, ಸರಿಯಾದ ಆಹಾರ, ವ್ಯಾಯಾಮ, ಹಾಗೂ ನಿಯಮಿತ ತಪಾಸಣೆಗಳ ಮೂಲಕ ಹೃದಯವನ್ನು ಆರೋಗ್ಯವಾಗಿರಿಸಿಕೊಳ್ಳಬಹುದು.

0 ಕಾಮೆಂಟ್‌ಗಳು